ವಿಜ್ಞಾನ ಮತ್ತು ತಂತ್ರಜ್ಞಾನ

ಅತಿಯಾದ ಸ್ಯಾನಿಟೈಸರ್ ಬಳಕೆ ಹಾನಿಕರಕ :ಎಐಐಎಂಎಸ್.

ನವದೆಹಲಿ: ಕರೊನಾ ಸೋಂಕಿನಿಂದ ಬಚಾವ್​ ಆಗಲು ಸ್ಯಾನಿಟೈಸರ್​ ಬಳಕೆ ಕೂಡ ಒಂದು ಮಾರ್ಗ. ಆದರೆ ಅತಿಯಾಗಿ ಸ್ಯಾನಿಟೈಸರ್ ಬಳಸಿದರೆ ಅದು  ಹಾನಿಕಾರಕವಾಗಿ ಪರಿಣಮಿಸಲಿದೆ!

ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್​ ಸೈನ್ಸಸ್​ (ಎಐಐಎಂಎಸ್​) ಮತ್ತು ಅಮೆರಿಕನ್ ಸೊಸೈಟಿ ಆಫ್​ ಮೈಕ್ರೊಬಯಾಲಜಿ ಆಯೋಜಿಸಿದ್ದ ವೆಬಿನಾರ್​ನಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ.

ಅತಿಯಾದ ಸ್ಯಾನಿಟೈಸರ್ ಹಾಗೂ ಆಯಂಟಿ ಮೈಕ್ರೋಬಿಯಲ್​ ಸೋಪ್​ಗಳ ಬಳಕೆಯಿಂದ ಆಯಂಟಿ ಮೈಕ್ರೋಬಿಯಲ್​ ರೆಸಿಸ್ಟೆನ್ಸ್ ಹೆಚ್ಚಾಗುವುದರಿಂದ ಪರಿಸ್ಥಿತಿ ಮತ್ತಷ್ಟು ವ್ಯತಿರಿಕ್ತವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಆಯಂಟಿ ಮೈಕ್ರೋಬಿಯಲ್ ಔಷಧಗಳಿಗೆ ರೋಗಕಾರಕ ಮೈಕ್ರೋಬ್​​ಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದನ್ನು ಆಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ. ಇದನ್ನು ಈಗಲೇ ಸರಿಯಾಗಿ ನಿರ್ವಹಿಸದಿದ್ದರೆ 2050ರ ಸುಮಾರಿಗೆ 1 ಕೋಟಿ ಮಂದಿ ಇದರ ಅಪಾಯ ಎದುರಿಸಬೇಕಾಗುತ್ತದೆ ಎಂಬ ಅಂದಾಜಿಸಲಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page