ಇತರ ಸುದ್ದಿ

ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಕಾರಿನ ಮೇಲೆ ಪೊಲೀಸರಿಂದ ಗುಂಡಿನ ದಾಳಿ !

ಮಂಗಳೂರು: ಕಾರಿನಲ್ಲಿ ಗೋವುಗಳನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಫೈರಿಂಗ್​ ನಡೆಸಿರುವ ಘಟನೆ ಮೂಡುಬಿದ್ರೆಯ ಶಿರ್ತಾಡಿ ಬಳಿಯ ಹೌದಾಲ್ ಎಂಬಲ್ಲಿ ನಡೆದಿದೆ.

ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಜಾನುವಾರು ಸಾಗಿಸ್ತಿದ್ದವರ ಬಂಧಿಸಲು ಮೂಡುಬಿದ್ರೆ ವೃತ್ತ ನಿರೀಕ್ಷಕ BS ದಿನೇಶ್ ಕುಮಾರ್ ತಂಡ ಚೇಸಿಂಗ್ ಮಾಡಿದೆ. ಈ ವೇಳೆ ಜೀಪ್‌ಗೆ ಡಿಕ್ಕಿ ಹೊಡೆಯಲು ಕದೀಮರು ಪ್ರಯತ್ನಿಸಿದ್ದಾರೆ ಆಗ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಪೊಲೀಸರು 6 ಜಾನುವಾರು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ

 

Related Articles

Leave a Reply

Your email address will not be published. Required fields are marked *

You cannot copy content of this page