ಶಿಕ್ಷಣ

1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಇಂದ ಗುಡ್ ನ್ಯೂಸ್.

ಬೆಂಗಳೂರು : 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ, ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲೂ 1ರಿಂದ 12ನೇ ತರಗತಿಯವರೆಗೆ ಶೇ.30ರಷ್ಟು ಪಠ್ಯಲನ್ನು ಕಡಿತಮಾಡಿ ಅಧಿಕೃತವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೊರೋನಾ ಕಾರಣದಿಂದಾಗಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ವೇಳೆಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಬೇಕಿತ್ತು. ಆದ್ರೇ ಬದಲಾದ ಸನ್ನಿವೇಶಗಳಿಂದಾಗಿ ತರಗತಿಗಳು ಹಿಂದಿನ ವರ್ಷಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಆರಂಭವಾಗಿರುವುದಿಲ್ಲ.

ಕೇಂದ್ರ ಸರ್ಕಾರವು 1 ರಿಂದ 12ನೇ ತರಗತಿಯವರೆಗೆ ಶೇ.30ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿ ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಹ ಪಠ್ಯ ವಸ್ತುವನ್ನು ಕಡಿತ ಮಾಡಲು ಕ್ರಮ ಕೈಗೊಂಡಿದೆ.

ಎಲ್ಲಾ ಸಮಿತಿಗಳು ಆಯಾ ವಿಷಯಗಳ ಪಠ್ಯ ಪುಸ್ತಕ, ವಸ್ತುಗಳಲ್ಲಿ ಕಡಿತಗೊಳಿಸಬಹುದಾದ ಪದ್ಯ, ಗದ್ಯ, ಅಧ್ಯಾಯ, ಉಪ-ಅಧ್ಯಾಯಗಳ ಪಟ್ಟಿಯನ್ನು ತಮ್ಮ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ, ವರದಿ ನೀಡಿರುತ್ತಾ ರೆ.

ಒಟ್ಟು 34 ವಿಷಯಗಳ ಪೈಕಿ, ಕರ್ನಾಟಕ ಸಂಗೀತ ವಿಷಯವನ್ನು ಹೊರತುಪಡಿಸಿ, 33 ವಿಷಯಗಳ ಮಾಹಿತಿಯನ್ನು ಮಾತ್ರ ಸಿದ್ಧಪಡಿಸಲಾಗಿದೆ. ಈ ಮೂಲಕ ರಾಜ್ಯದ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಲಾಗಿದೆ ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

You cannot copy content of this page