ವಿಜ್ಞಾನ ಮತ್ತು ತಂತ್ರಜ್ಞಾನ

ಜಿಮೇಲ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ.

ನವದೆಹಲಿ : ಜಿಮೇಲ್ ಬಳಕೆದಾರರಿಗೆ ಗೂಗಲ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2 ವರ್ಷಗಳಿಂದ ಜಿಮೇಲ್ ಖಾತೆ ನಿಷ್ಕ್ರಿಯವಾಗಿದ್ದಲ್ಲಿ ಅದನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ.

1 ಜೂನ್ 2021 ರಿಂದ ಗೂಗಲ್ ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ನಿಮ್ಮ ಗೂಗಲ್ ಫೋಟೋ, ಗೂಗಲ್ ಡ್ರೈವ್, ಅಥವಾ ಜಿಮೇಲ್ ಖಾತೆಗಳಲ್ಲಿ ಹೆಚ್ಚು ಚಟುವಟಿಕೆ ಇಲ್ಲ ಎಂದಾದರೆ ಅಂತಹ ಖಾತೆಗಳನ್ನು ಮುಚ್ಚಲಾಗುತ್ತದೆ. ಈ ಖಾತೆಗಳಿಂದ ನಿಮ್ಮ ಎಲ್ಲಾ ಮಾಹಿತಿಗಳನ್ನು ತೆಗೆದು ಹಾಕಲಾಗುತ್ತದೆ.

ನಿಮ್ಮ ಖಾತೆಯನ್ನು ಸಕ್ರಿಯವಾಗಿಡಲು ಸರಳ ವಾದ ಮಾರ್ಗವೆಂದರೆ, ಸೈನ್ ಇನ್ ಆಗಿರುವಾಗ ಮತ್ತು ಇಂಟರ್ನೆಟ್ ಗೆ ಸಂಪರ್ಕಗೊಂಡಾಗ, ಜಿಮೇಲ್, ಡ್ರೈವ್ ಅಥವಾ ಫೋಟೋಗಳಿಗೆ ಆಗಾಗ ವೆಬ್ ಅಥವಾ ಮೊಬೈಲ್ ಗೆ ಭೇಟಿ ನೀಡಿ’ ಎಂದು ಗೂಗಲ್ ಬ್ಲಾಗ್ ನಲ್ಲಿ ಬರೆದಿದೆ.

Related Articles

Leave a Reply

Your email address will not be published. Required fields are marked *

You cannot copy content of this page