ಇತರ ಸುದ್ದಿ

ವಿಲೀನಗೊಂಡ ಬ್ಯಾಂಕ್ : ಏಪ್ರಿಲ್ 1 ರಿಂದ ಈ 8 ಬ್ಯಾಂಕ್ ಗಳ ಚೆಕ್ ಅಮಾನ್ಯ.!

ನವದೆಹಲಿ :- ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಇತ್ತೀಚೆಗೆ ವಿಲೀನಗೊಂಡಿರುವ ಸಾರ್ವಜನಿಕ ವಲಯದ 8 ಬ್ಯಾಂಕ್ ಗಳು ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಈ 8 ಬ್ಯಾಂಕ್ ಗಳ ಚೆಕ್ ಮತ್ತು ಪಾಸ್ ಬುಕ್ ಗಳು ಏಪ್ರಿಲ್ 1 ರಿಂದ ಅಮಾನ್ಯಗೊಳ್ಳಲಿವೆ.

ಏನೇನು ಬದಲಾವಣೆ :- 

ಏ.1ರಿಂದ ದೇನಾ, ವಿಜಯಾ, ಕಾರ್ಪೊರೇಷನ್‌, ಆಂಧ್ರ, ಯುನೈಟೆಡ್‌, ಸಿಂಡಿಕೇಟ್‌, ಅಲಹಾಬಾದ್‌ ಬ್ಯಾಂಕ್‌ ಮತ್ತು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗಳ ಚೆಕ್‌ ಮತ್ತು ಪಾಸ್‌ಬುಕ್‌ ಸ್ವೀಕರಿಸುವುದಿಲ್ಲ.

ಈ ಬ್ಯಾಂಕುಗಳ ಗ್ರಾಹಕರು ವಿಲೀನಗೊಂಡಿರುವ ಬ್ಯಾಂಕುಗಳಿಂದ ಹೊಸ ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ ಪಡೆದುಕೊಳ್ಳಬೇಕು. ಹಳೆಯದನ್ನು ಹಾಗೇ ಇಟ್ಟುಕೊಳ್ಳಬೇಕು.

ಅಗತ್ಯಬಿದ್ದರೆ ಮೊಬೈಲ್‌ ನಂಬರ್‌, ವಿಳಾಸ, ನಾಮಿನಿ ಇತ್ಯಾದಿ ವಿವರ ಅಪ್‌ಡೇಟ್‌ ಮಾಡಿಕೊಳ್ಳಬೇಕು.

ಹೊಸ ವಿವರಗಳನ್ನು ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌ ಅಕೌಂಟ್‌, ಜೀವ ವಿಮೆ, ಆದಾಯ ತೆರಿಗೆ ಖಾತೆಗಳು, ಎಫ್‌ಡಿ/ ಆರ್‌ಡಿ, ಪಿಎಫ್‌ ಖಾತೆಗಳು, ಲಾಕರ್‌ಗಳು, ಗ್ಯಾಸ್‌ ಏಜೆನ್ಸಿ ಮುಂತಾದವುಗಳಿಗೆ ನೀಡಬೇಕು.

ವಿಲೀನಗೊಂಡ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್‌ ಬದಲಾಗುತ್ತವೆ.

Related Articles

Leave a Reply

Your email address will not be published. Required fields are marked *

You cannot copy content of this page