ರಾಷ್ಟ್ರ

ರೈಲಿನಲ್ಲಿ ಧೂಮಪಾನ ಮಾಡಿದ್ರೆ 1000 ರೂ. ದಂಡ, 3 ವರ್ಷ ಜೈಲು ಶಿಕ್ಷೆ !

ನವದೆಹಲಿ :- ಧೂಮಪಾನಿಗಳಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ ಧೂಮಪಾನ ಮಾಡಿದರೆ 1000 ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದ್ದು, ಈ ನಿಯಮ ಸೋಮವಾರದಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ.

ಮಾ.13ರಂದು ಉತ್ತರಾಖಂಡದ ರೈವಾಲಾದಲ್ಲಿ ದೆಹಲಿ-ಡೆಹ್ರಾಡೂನ್‌ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಎಸ್‌5 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರಾಥಮಿಕ ತನಿಖೆಯ ವೇಳೆ ಆ ಘಟನೆಗೆ ಯಾರೋ ಬೋಗಿಯ ಶೌಚಾಲಯದ ಡಸ್ಟ್‌ಬಿನ್‌ಗೆ ಬೀಡಿ ಅಥವಾ ಸಿಗರೆಟ್‌ನ ತುಂಡನ್ನು ಎಸೆದಿರುವುದು ಕಾರಣವೆಂದು ತಿಳಿದುಬಂದಿದೆ. ಜೋರಾಗಿ ಚಲಿಸುವ ರೈಲಿನಲ್ಲಿ ಗಾಳಿಯ ಸಂಚಾರವೂ ವೇಗವಾಗಿ ಇದ್ದುದರಿಂದ ಕಸದ ಬುಟ್ಟಿಯಲ್ಲಿದ್ದ ಕಾಗದಕ್ಕೆ ಬೆಂಕಿ ಹೊತ್ತಿಕೊಂಡು ಅದು ಎಲ್ಲೆಡೆ ವ್ಯಾಪಿಸಿದೆ ಎಂದು ಹೇಳಲಾಗಿದೆ.

ರೈಲುಗಳಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತ ತಡೆಯುವುದಕ್ಕಾಗಿ ರೈಲ್ವೆ ಇಲಾಖೆ ಈ ಆದೇಶ ಹೊರಡಿಸಿದ್ದು, ಧೂಮಪಾನ ಮಾಡುವುದು ಮತ್ತು ಉರಿಯುವಂತಹ ವಸ್ತುಗಳ ಸಾಗಣೆಗೆ ರೈಲಿನಲ್ಲಿ ಸಂಪೂರ್ಣ ನಿಷೇಧ ಮಾಡಲಾಗಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಪ್ರಕಾರ, ಉರಿಯುವಂತಹ ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯುದರೆ 3 ವರ್ಷ ಶಿಕ್ಷೆ ಅಥವಾ 1000 ರೂ. ದಂಡ ವಿಧಿಸಲು ಮುಂದಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page