ರಾಜ್ಯ

ಕೊರೋನಾ ಅಬ್ಬರ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಭೀತಿ!

ಬೆಂಗಳೂರು :- ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಇನ್ನಷ್ಟುಹೆಚ್ಚಾಗುತ್ತಾ ಮುಂದುವರೆದರೆ ಏಪ್ರಿಲ್‌ ಅಂತ್ಯದಿಂದ ವಾರಾಂತ್ಯದ ಲಾಕ್‌ಡೌನ್‌ ಜಾರಿ, ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡುವ ಭೀತಿ ಎದುರಾಗಿದೆ.

ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಶೇ.80ರಿಂದ 85ರಷ್ಟು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿದೆ. ಈಗಾಗಲೇ 8 ಜಿಲ್ಲೆಗಳಲ್ಲಿ ಕೊರೊನಾ ಕಫ್ರ್ಯೂ ವಿಸಿದ್ದೇವೆ. ಇದರಿಂದ ವ್ಯಕ್ತವಾಗುವ ಫಲಿತಾಂಶವನ್ನು ನೋಡಿಕೊಂಡು ಮುಂದೆ ತೀರ್ಮಾನಿಸೋಣ. ಅಗತ್ಯಬಿದ್ದರೆ ಇನ್ನು ಕೆಲವು ಕಡೆ ಕಫ್ರ್ಯೂ ಜಾರಿ ಮಾಡಲಾಗುವುದು. ಮೈಕ್ರೋ ಕಂಟೈನ್ಮೆಂಟ್ ಮತ್ತು ಕಂಟೋನ್ಮೆಂಟ್ ವಲಯಗಳನ್ನು ಹೆಚ್ಚಳ ಮಾಡಲಾಗುವುದು ಎಂದರು.

80 ಸಾವಿರಿಂದ ಒಂದು ಲಕ್ಷದವರೆಗೆ ಕೋವಿಡ್ ಟೆಸ್ಟ್ ನಡೆಸುವ ಗುರಿ ನೀಡಲಾಗಿದೆ. ಸಾಧ್ಯವಾದರೆ ಇನ್ನಷ್ಟು ಕಂಟೈನ್ಮೆಂಟ್ ವಲಯಗಳನ್ನು ಹೆಚ್ಚಿಸಲಾಗುವುದು. ಅಲ್ಲದೆ ಧಾರ್ಮಿಕ, ಸಭೆ ಸಮಾರಂಭಗಳು, ಮದುವೆ ಮಂಟಪಗಳಿಗೂ ನಿರ್ಬಂಧ ಹಾಕಲಾಗುವುದು.

ಲಾಕ್‍ಡೌನ್ ಜಾರಿಯಾದರೆ ಜನರಿಗೆ ನೇರವಾಗಿ ಹೊಡೆತ ಬೀಳಲಿದೆ. ಹೀಗಾಗಿ ಸಿಎಂ ಒಪ್ಪುತ್ತಿಲ್ಲ. ಪ್ರಧಾನಿಯವರು ಕೂಡ ಲಾಕ್‍ಡೌನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬೇರೆ ಸಲಹೆಗಳನ್ನು ನೀಡಬೇಕು ಎಂದು ಸುಧಾರಕ್ ಸಮಿತಿ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

You cannot copy content of this page