ರಾಜ್ಯ

ಕರ್ನಾಟಕದಲ್ಲಿ ಸಂಪೂರ್ಣ ಲಾಕ್‌ಡೌನ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲಿಟ್ ಮಾಹಿತಿ

ಬೆಂಗಳೂರು :-  ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ನಿರ್ಣಾಯಕ ಹೋರಾಟ ನಡೆಸಿದ್ದು, ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮೇ 10 ರ ಬೆಳಗ್ಗೆ 6ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದರು. ಇದರ ಬೆನ್ನಲ್ಲೇ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಏನೆಲ್ಲ ಇರುತ್ತೆ ?

* ಆಹಾರ, ಹಣ್ಣು-ತರಕಾರಿ, ದಿನಸಿ, ಮೀನು- ಮಾಂಸ, ಪ್ರಾಣಿಗಳ ಆಹಾರಗಳನ್ನು (ಬೆಳಿಗ್ಗೆ 6 ರಿಂದ 10 ವರೆಗೆ ಮಾತ್ರ ಮಾರಾಟ ಮಾಡುವುದು), ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿದೆ. 24×7 ಎಲ್ಲ ಬಗೆಯ ಹೋಂ ಡೆಲಿವರಿಗೆ ಅವಕಾಶ

*ಬೆಳಿಗ್ಗೆ 6 ರಿಂದ 10 ರವರೆಗೆ ಮದ್ಯದಂಗಡಿಯಿಂದ ಪಾರ್ಸೆಲ್‌ ಒಯ್ಯಬಹುದು.

*ತಳ್ಳುವ ಗಾಡಿಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ರವರೆಗೆ ಹಣ್ಣು ತರಕಾರಿ ಮಾರಬಹುದು

* ಹಾಲಿನ ಬೂತ್‌ಗಳು ಮತ್ತು ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆಯಬಹುದು.

*ಆಹಾರ ಸಂಸ್ಕರಣಾ ಘಟಕಗಳು, ಬ್ಯಾಂಕ್‌, ವಿಮಾ ಕಚೇರಿಗಳು, ಎಟಿಎಂಗಳು, ದೂರಸಂಪರ್ಕ, ಇಂಟರ್‌ನೆಟ್‌ ಸೇವೆ

*ಇ-ಕಾರ್ಮಸ್‌ನವರು ಮನೆಗಳಿಗೆ ವಸ್ತುಗಳನ್ನು ತಲುಪಿಸಲು ಅವಕಾಶ

* ಕೋಲ್ಡ್‌ ಸ್ಟೋರೇಜ್‌, ಗೋದಾಮು ಸೇವೆಗಳು

* ವಿಮಾನ ಸಂಚಾರ ಮತ್ತು ರೈಲಿನ ಕಾರ್ಯಾಚರಣೆ ಇದೆ. ಇದರ ಮೂಲಕ ಬಂದವರು ಟಿಕೆಟ್‌ ತೋರಿಸಿ, ತಮ್ಮ ಮನೆಗಳಿಗೆ ತಾವೇ ಮಾಡಿಕೊಂಡ ಖಾಸಗಿ ವಾಹನ, ಆಟೋ, ಕ್ಯಾಬ್‌ ಮೂಲಕ ಹೋಗಬಹುದು

* ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಸಾರ್ವಜನಿಕ ಮತ್ತು ಖಾಸಗಿ ರಂಗದ ಉದ್ಯಮಗಳು ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಬಹುದು.

* ಕೋವಿಡ್ ನಿಯಮ ಪಾಲಿಸಿ ನಿರ್ಮಾಣ ಕಾಮಗಾರಿಗಳನ್ನು ನಡೆಸಬಹುದು. ಕಾರ್ಮಿಕರಿಗೆ ವಾಸ್ತವ್ಯಕ್ಕೆ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಬಹುದು.

* ಮದುವೆಗಳಿಗೆ ಅವಕಾಶ ಇದ್ದು, 50 ಜನ ಮೀರುವಂತಿಲ್ಲ.

* ಅಂತ್ಯಕ್ರಿಯೆಗೆ 5 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

* ಆಸ್ಪತ್ರೆಗಳು, ಆಯುಷ್ ಮತ್ತು ವೆಟರ್ನರಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಔಷಧದ ಅಂಗಡಿಗಳು, ಲ್ಯಾಬ್‌ಗಳು, ಜನೌಷಧಿ ಕೇಂದ್ರಗಳು, ರಕ್ತ ನಿಧಿಗಳು

* ಕೃಷಿ ಚಟುವಟಿಕೆಗಳು

* ಅಂಗವಿಕಲರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರ ಆರೈಕೆ ವ್ಯವಸ್ಥೆ

ಏನೆಲ್ಲ ಇರುವುದಿಲ್ಲ ?

* ಮೆಟ್ರೊ ಸೇವೆ

* ತುರ್ತು ಸಂದರ್ಭ ಹೊರತುಪಡಿಸಿ ಟ್ಯಾಕ್ಸಿ, ಕ್ಯಾಬ್‌, ಆಟೋಗಳಿಗೆ ಹಾಗೂ ನಾಗರಿಕರ ಓಡಾಟ

* ಶಾಲಾ-ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳು ನಡೆಯುವಂತಿಲ್ಲ. ಆನ್‌ಲೈನ್ ತರಗತಿಗಳಿಗಷ್ಟೇ ಅವಕಾಶ

* ಹೊಟೇಲ್‌, ರೆಸ್ಟೋರೆಂಟ್‌ ಮತ್ತು ಆತಿಥ್ಯ ಸೇವೆಗಳು. (ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ ಒಯ್ಯಬಹುದು)

* ಸಿನಿಮಾ ಹಾಲ್‌, ಶಾಪಿಂಗ್ ಮಾಲ್‌, ಜಿಮ್ನಾಷಿಯಂ, ಕ್ರೀಡಾ ಕಾಂಪ್ಲೆಕ್ಸ್‌, ಈಜುಕೊಳ

* ಸಾಮಾಜಿಕ, ರಾಜಕೀಯ, ಧಾರ್ಮಿಕ, ಮನರಂಜನೆಗಾಗಿ ಜನರನ್ನು ಸೇರಿಸುವುದು ನಿಷೇಧ.

ಕಾರ್ಯ ನಿರ್ವಹಿಸುವ ಸರ್ಕಾರಿ ಕಚೇರಿಗಳು:

* ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್‌, ಹೋಮ್‌ ಗಾರ್ಡ್‌, ಅಗ್ನಿಶಾಮಕ,ಕಂದಾಯ ವಿದ್ಯುತ್‌, ನೀರು, ನೈರ್ಮಲ್ಯ

* ಬಿಬಿಎಂಪಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು.

ಕಟ್ಟುನಿಟ್ಟಿನ ಕ್ರಮಗಳೇನು?

* ಸಾರ್ವಜನಿಕರು ರಸ್ತೆಗೆ ಬರುವಂತಿಲ್ಲ

* ಖಾಸಗಿ ಮತ್ತು ಸರ್ಕಾರಿ ಬಸ್‌ಗಳು, ವಾಹನಗಳು ಸಂಚಾರ ಇಲ್ಲ.

*ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳ ವಾಹನ ಸಂಚಾರವಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಅವಕಾಶ ನೀಡಲಾಗುವುದು.

* ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಹೈಕೋರ್ಟ್‌ ನ್ಯಾಯಮೂರ್ತಿಗಳು, ಅಧಿಕಾರಿಗಳು ಸಿಬ್ಬಂದಿ ಗುರುತಿನ ಚೀಟಿ ಇಟ್ಟುಕೊಂಡರೆ ಮಾತ್ರ ಸಂಚಾರಕ್ಕೆ ಅವಕಾಶ.

Related Articles

Leave a Reply

Your email address will not be published. Required fields are marked *

You cannot copy content of this page