ಇತರ ಸುದ್ದಿ

ಕೋಡಿಮಠ ಶ್ರೀಗಳಿಂದ ಕೋವಿಡ್ ಕುರಿತು ಅಚ್ಚರಿಯ ಭವಿಷ್ಯ.!

ಹಾಸನ :- ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮನುಷ್ಯ ಹೋಗುವಾಗಲೇ ಬಿದ್ದು ಸಾಯುವ ಕಾಲ ಬರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

ಹಿಂದೆ ನೆಲಪಟ್ಟು ಎನ್ನುವ ಕಾಯಿಲೆ ಇದ್ದು, ಅದನ್ನು ರಾಹು ಎಂದು ಕರೆಯಲಾಗುತ್ತಿತ್ತು. ರಾಹು ಬಡಿದು ಹೋಗುವಾಗಲೇ ಬಿದ್ದ ಎಂದು ಹೇಳುತ್ತಿದ್ದರು. ಅಂತಹ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬರಲಿದೆ ಎಂದು ಭವಿಷ್ಯ ಹೇಳಿದ್ದಾರೆ.

ಕರೊನಾ ಸಂಪೂರ್ಣ ಮಾಯವಾಗಲು ಇನ್ನೂ 10 ವರ್ಷ ಬೇಕಾಗುತ್ತದೆ. ಜೂನ್ 20ರ ಬಳಿಕ ಸದ್ಯದ ಪರಿಸ್ಥಿತಿ ಸುಧಾರಿಸಲಿದೆ. ಕಫ, ಪಿತ್ತ, ವಾತದ ಮೂಲಕ ಕಾಯಿಲೆ ಬಂದು ಮನುಷ್ಯ ನರಳುತ್ತಾನೆಂದು ಎರಡು ವರ್ಷದ ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ. ಪ್ರಳಯ ಆಗುತ್ತೆ ಅಂದಿದ್ದೆ. ಹಿಮಾಲಯದಲ್ಲಿ ಅದೂ ಘಟಿಸಿತು.

ಭವಿಷ್ಯದಲ್ಲಿ ಇನ್ನೊಂದು ದೊಡ್ಡ ಅಲೆ ಬರಲಿದ್ದು ಅದರ ಪರಿಣಾಮ ಕೆಟ್ಟದಿದೆ. ಈಗ ಹೂಳುತ್ತಿರುವ ಹೆಣಗಳು ಆಗ ಮಾತನಾಡುತ್ತವೆ. ನಾನು ಹೇಳುವುದನ್ನೆಲ್ಲ ನೀವು ನೋಡುತ್ತೀರಿ ಎಂದರು. ‘ಕುಂಭದಲ್ಲಿ ಗುರು ಬರಲು ತುಂಬುವುದು ಕೆರೆ-ಕಟ್ಟೆ, ಶಂಭುವಿನ ಪದಸಾಕ್ಷೆ ಡಂಬವೆನಿಸಲು’ ಅಂದರೆ, ಕುಂಭ ರಾಶಿಯಲಿ ಮಳೆ ಹೆಚ್ಚಿದ್ದು, ಅದರ ಜತೆ ಶೀತವೂ ಇರಲಿದೆ. ಶೀತ ಎಂದರೆ ಕಾಯಿಲೆ ಎಂದರ್ಥ. ಕಾರ್ತಿಕದವರೆಗೆ ಕರೊನಾ ಆರ್ಭಟ ಜೋರಾಗಿರಲಿದೆ. ಗಾಳಿ, ಆಕಾಶ ಹಾಗೂ ಭೂಮಿಯ ಸ್ವಚ್ಛತೆಗೆ ಹೀಗೆಲ್ಲ ಆಗುತ್ತಿದೆ. ಪ್ರಕೃತಿಯಿಂದ ಯೋಗವಿದೆ. ಸಂಕ್ರಾಂತಿ ಬಳಿಕ ವಿಶ್ವದಲ್ಲಿ ಬಹುದೊಡ್ಡ ವಿಪ್ಲವ ಸಂಭವಿಸಲಿದೆ. ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ರಾಜಕೀಯ ಭೀತಿ ಇದೆ. ಸಾಮೂಹಿಕ ಸಾವು-ನೋವು ಹೆಚ್ಚುತ್ತದೆ ಎಂದರು.

Related Articles

Leave a Reply

Your email address will not be published. Required fields are marked *

You cannot copy content of this page