ರಾಷ್ಟ್ರ

ಮನೆ, ಮಳಿಗೆ ಬಾಡಿಗೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಕೇಂದ್ರದಿಂದ ಹೊಸ ಕಾಯ್ದೆ

ಹೊಸದಿಲ್ಲಿ :- ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಮಾದರಿ ಬಾಡಿಗೆ ಕಾಯ್ದೆಗೆ ಒಪ್ಪಿಗೆಯನ್ನು ನೀಡಿದೆ. ದೇಶಾದ್ಯಂತ ಬಾಡಿಗೆ ಮನೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಕಾನೂನುಗಳನ್ನು ಪರಿಷ್ಕರಿಸಲು ಈ ಕಾಯ್ದೆಯು ನೆರವಾಗಲಿದೆ.

ಈ ಕಾಯ್ದೆಯು ಮನೆಗಳ ಭಾರೀ ಕೊರತೆಯನ್ನು ನೀಗಿಸಲು ಮನೆ ಬಾಡಿಗೆ ಕ್ಷೇತ್ರವನ್ನು ಉದ್ಯಮವನ್ನಾಗಿಸಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಬಾಡಿಗೆ ಮನೆ ಮಾಲೀಕರು ಇನ್ನು ಮುಂದೆ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡ ಪಡೆಯಬೇಕಿದೆ. ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆ ಕಲ್ಪಿಸುತ್ತದೆ.

ಮಾಸಿಕ ಮನೆ ಬಾಡಿಗೆ ಮೊತ್ತದ ಎರಡು ತಿಂಗಳ ಹಣವನ್ನು ಮಾತ್ರ ಭದ್ರತಾ ಠೇವಣಿಯಾಗಿ ಅಡ್ವಾನ್ಸ್ ಪಡೆಯಬಹುದು. ವಾಣಿಜ್ಯ ಕಟ್ಟಡಗಳಿಗೆ ಬಾಡಿಗೆ ಮೊತ್ತದ 6 ತಿಂಗಳ ಹಣ ಮಾತ್ರ ಅಡ್ವಾನ್ಸ್ ಪಡೆಯಬಹುದು. ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆ ಹೆಚ್ಚಿಸಬಹುದು. ಎರಡು ತಿಂಗಳ ನಂತರ ಖಾಲಿ ಮಾಡದಿದ್ದರೆ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆದಾರನ ಮನೆಗೆ ಮಾಲೀಕ ಏಕಾಏಕಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page