ಇತರ ಸುದ್ದಿ

ರಾಜ್ಯದ ಜನತೆಗೆ ‘ಕರೆಂಟ್’ ಶಾಕ್ – ಕೊರೊನಾ ಸಂಕಷ್ಟದ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಹೊರೆ !

ಬೆಂಗಳೂರು :- ಕೊರೋನಾ ಸಂಕಷ್ಟದ ಹೊತ್ತಲ್ಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದ್ದು, ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ದರ ಹೆಚ್ಚಳಕ್ಕೆ ಸಮ್ಮತಿ ಸೂಚಿಸಲಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ರಾಜ್ಯದಲ್ಲಿ ವಿದ್ಯುತ್​ ದರಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದೆ. ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (₹1.35) ಬೆಲೆ ಏರಿಕೆ ಕೋರಿ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶ ಪರಿಶೀಲಿಸಿರುವ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

51-100 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 5.45 ರು ಗಳಿಂದ 5.55 ರು ಗಳಿಗೆ ಹೆಚ್ಚಿಸಲಾಗಿದೆ.
101-200 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 7.00 ರು ಗಳಿಂದ 7.10ರು ಗಳಿಗೆ ಹೆಚ್ಚಿಸಲಾಗಿದೆ.

ಪರಿಷ್ಕೃತ ದರಗಳು ಏಪ್ರಿಲ್ 1, 2021ರ ನಂತರದ ಮೊದಲ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳ ದರ ಪರಿಷ್ಕರಣೆಯ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಸೂಲಿ ಮಾಡಲು ಆದೇಶ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page