ರಾಷ್ಟ್ರ

ಡಿಎಲ್ ಪಡೆಯಲು RTO ಕಚೇರಿಗೆ ಹೋಗಬೇಕಿಲ್ಲ ! ಜುಲೈ 1 ರಿಂದ ಹೊಸ ನಿಯಮ

ನವದೆಹಲಿ :- ಆರ್ಟಿಓ ಕಚೇರಿಗೆ ಹೋಗದೆ ಡಿಎಲ್ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಚಾಲನಾ ಪರವಾನಗಿ ಕ್ರಮಗಳ ಸುಧಾರಣೆ ಮಾಡಿದ್ದು, ಆರ್ಟಿಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮಧ್ಯವರ್ತಿಯನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕುಳಿತುಕೊಂಡು ಡಿಎಲ್ ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಜು.1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ. ಅಲ್ಲದೇ, ಖಾಸಗಿಯವರೇ ನಿಮಗೆ ಡ್ರೈವಿಂಗ್‌ ಲೈಸೆನ್ಸ್‌ ಅನ್ನೂ ನೀಡಬಹುದಾಗಿದೆ. ಚಾಲನಾ ಪರವಾನಗಿಗಾಗಿ ನೀವು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಪರೀಕ್ಷೆಯನ್ನೂ ಕೊಡಬೇಕಾಗಿಲ್ಲ ಎಂಬುದು ವಿಶೇಷ.

ನಿಮ್ಮ ಸಂಪೂರ್ಣ ತರಬೇತಿ, ಪರೀಕ್ಷೆ ಮತ್ತು ಉತ್ತೀರ್ಣವಾಗುವ ಎಲ್ಲಾ ವಿಧಾನವೂ ಎಲೆಕ್ಟ್ರಾನಿಕ್‌ ಆಗಿ ರೆಕಾರ್ಡ್‌ ಆಗುತ್ತದೆ. ಇದನ್ನು ಸರ್ಕಾರ ಆಡಿಟ್‌ ಕೂಡ ಮಾಡಲಿದೆ. ಹೀಗಾಗಿ, ಖಾಸಗಿಯವರಿಂದ ಚಾಲನಾ ಪರವಾನಗಿ ಪಡೆಯುವಾಗ ಯಾವುದೇ ಅಡ್ಡದಾರಿಗಳಿಗೆ ಅವಕಾಶವಿಲ್ಲದಂತಾಗಿದೆ.

ಇಡೀ ಪ್ರಕ್ರಿಯೆ ಮಾನವ ರಹಿತವಾಗಿ ನಡೆಯುತ್ತದೆ. ಅಲ್ಲದೆ, ಚಾಲನಾ ಪರವಾನಗಿ ನೀಡುವ ಖಾಸಗಿ ಸಂಸ್ಥೆಗಳಿಗೂ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಅಂದರೆ, ಅವರು ಹೊಂದಿರುವ ಸ್ಥಳಾವಕಾಶ, ಡ್ರೈವಿಂಗ್‌ ಟ್ರ್ಯಾಕ್‌, ಮಾಹಿತಿ ಮತ್ತು ತಂತ್ರ ಜ್ಞಾನ ವ್ಯವಸ್ಥೆ, ಬಯೋಮೆಟ್ರಿಕ್‌ ವ್ಯವಸ್ಥೆ ಹೊಂದಿರಬೇಕು. ಇಂಥ ಕಂಪನಿಗಳಿಗೆ ಮಾತ್ರ ಸರ್ಕಾರ ಮಾನ್ಯತೆ ನೀಡುತ್ತದೆ. ಇವರು ಸರ್ಕಾರ ನೀಡಿರುವ ಪಠ್ಯಕ್ರಮದ ಆಧಾರದ ಮೇರೆಗೆ ತರಬೇತಿ ಕೊಟ್ಟು, ಪರೀಕ್ಷೆ ನಡೆಸಿ ಪಾಸ್‌ ಮಾಡಬೇಕು. ಈ ಕೇಂದ್ರ ಒಮ್ಮೆ ಇವರು ಪಾಸಾಗಿದ್ದಾರೆ ಎಂದು ಪ್ರಮಾಣ ಪತ್ರ ನೀಡಿದರೆ ಸಾಕು, ಅದು ಸಂಬಂಧ ಪಟ್ಟ ಅಧಿಕಾರಿಯ ಬಳಿಗೆ ಹೋಗುತ್ತದೆ.

* ಸಾರಿಗೆ ಸಚಿವಾಲಯದ ವೆಬ್‌ಸೈಟ್‌ಗೆ https://parivahan.gov.in/parivahan//en ಗೆ ಭೇಟಿ ನೀಡಿ

* ಮುಖಪುಟದಲ್ಲಿ ಆನ್‌ಲೈನ್ ಸೇವೆಗಳ ಟ್ಯಾಬ್ ಕ್ಲಿಕ್ ಮಾಡಿ. ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
* ಡ್ರಾಪ್ ಡೌನ್ ಮೆನುವಿನಿಂದ ‘ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು’ ಆಯ್ಕೆಮಾಡಿ.
* ನೀವು ಸೇವೆಯನ್ನು ಬಯಸುವ ‘ರಾಜ್ಯ’ ಆಯ್ಕೆಮಾಡಿ
* ಹೊಸ ವಿಂಡೋ ತೆರೆಯುತ್ತದೆ. ಆಯ್ಕೆಯನ್ನು ಆರಿಸಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ. ಅಲ್ಲಿ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.

Related Articles

Leave a Reply

Your email address will not be published. Required fields are marked *

You cannot copy content of this page