ರಾಜ್ಯ

ಜೂನ್ 21 ರಿಂದ ಅನ್ ಲಾಕ್ 2.0 ಜಾರಿಗೆ ಗ್ರೀನ್ ಸಿಗ್ನಲ್ : ಏನಿರುತ್ತೆ, ಏನಿರಲ್ಲ?

ಬೆಂಗಳೂರು :- ರಾಜ್ಯದ್ಲಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 21 ರಿಂದ ಅನ್ ಲಾಕ್ 2.0 ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.

ಜೂನ್ 21 ರಂದು ಕೋವಿಡ್ ಸೆಮಿ ಲಾಕ್ ಡೌನ್ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದ್ದು, ಇದರ ಸಂಬಂಧ ಶುಕ್ರವಾರ ಅಥವಾ ಶನಿವಾರದ ಹೊತ್ತಿಗೆ ಸರ್ಕಾರದ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ ನಿರ್ಬಂಧ ಸಡಿಲಿಕೆ ಮಾಡುವ ಕುರಿತಂತೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಜೂನ್ 21 ರಿಂದ ಮಾಲ್, ಹೇರ್​ ಕಟ್​ ಶಾಪ್, ಹೋಟೆಲ್, ಚಿಕ್ಕ‌ಚಿಕ್ಕ ಮಾರುಕಟ್ಟೆ, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಿ ಮುಕ್ತಗೊಳಿಸಲಾಗುವುದು.ರಾಜ್ಯದಲ್ಲಿ ಅನ್‌ಲಾಕ್ 2.O ಜಾರಿಯಾಗುವ ಹಿನ್ನೆಲೆಯಲ್ಲಿ ಜೂ.21ರಿಂದ ಕರ್ನಾಟಕದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರವಾಗುವ ಸಾಧ್ಯತೆ ಇದೆ.

ಚಿನ್ನದಂಗಡಿ, ಬಟ್ಟೆ ಅಂಗಡಿ, ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳುಕೂಡ ಜೂನ್ 21 ರಿಂದ ಓಪನ್ ಆಗಲಿವೆ. ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶ ಅವಕಾಶ ನೀಡಲಾಗಿದೆ.

ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ‌ ಗ್ರಿನ್ ಸಿಗ್ನಲ್ ದೊರೆತಿದೆ. ಹಾಗೆಯೇ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಅಭಿಪ್ರಾಯದಂತೆ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಪಬ್, ಬಾರ್, ಕ್ರೀಡಾಂಗಣಗಳು ಬಂದ್ ಆಗಿರಲಿವೆ, ಇವುಗಳೆಲ್ಲವೂ ಮೂರನೇ ಹಂತದ ಅನ್‌ಲಾಕ್ ಸಂದರ್ಭದಲ್ಲಿ ತೆರೆಯುವ ನಿರೀಕ್ಷೆ ಇದೆ.

Related Articles

Leave a Reply

Your email address will not be published. Required fields are marked *

You cannot copy content of this page