ಶಿಕ್ಷಣ

SSLC ಪರೀಕ್ಷೆಗೆ ಅಧಿಸೂಚನೆ ಪ್ರಕಟ : ಎಲ್ಲರೂ ಉತ್ತೀರ್ಣ, ಮರುಮೌಲ್ಯಮಾಪನ ಇಲ್ಲ.

ಬೆಂಗಳೂರು :- ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡೇ ದಿನದಲ್ಲಿ ನಡೆಸಲು ನಿರ್ಧರಿಸಿದ್ದ ಶಿಕ್ಷಣ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷಾ ವೇಳಾಪಟ್ಟಿಜೂನ್‌ ಮೂರನೇ ವಾರ ಪ್ರಕಟಿಸುವ ಸಾಧ್ಯತೆ ಇದೆ.

2020-21ನೇ ಸಾಲಿನ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಕನಿಷ್ಠ ಉತ್ತೀರ್ಣತೆಯ ಅಂಕ ನೀಡಿ, ವಿದ್ಯಾರ್ಥಿಗಳು ಗಳಿಸುವ ಅಂಕದ ಆಧಾರದಲ್ಲಿ ಶ್ರೇಣಿ ನೀಡಲು ಸೂಚಿಸಲಾಗಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಮೂರು ಭಾಷೆ ವಿಷಯಗಳಿಗೆ ಒಂದೇ ದಿನ ಪರೀಕ್ಷೆ ನಡೆಯಲಿದೆ.

90ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ+, 80ರಿಂದ 89 ಅಂಕ ಪಡೆಯುವ ವಿದ್ಯಾರ್ಥಿ ಗಳಿಗೆ ಎ, 60ರಿಂದ 79 ಅಂಕ ಪಡೆಯುವ ವಿದ್ಯಾರ್ಥಿ ಗಳಿಗೆ ಬಿ ಮತ್ತು 35ರಿಂದ 59 ಅಂಕ ಪಡೆ ಯುವ ವಿದ್ಯಾರ್ಥಿಗಳಿಗೆ ಸಿ ಶ್ರೇಣಿ ನೀಡಲು ತಿಳಿಸಿದೆ. ಪ್ರತೀ ವಿಷಯದ ಪರೀಕ್ಷೆಗೆ 40 ಅಂಕಗಳಿಗೆ ನಡೆಯಲಿದ್ದು, ಅವುಗಳನ್ನು 80 ಅಂಕಗಳಿಗೆ ಪರಿವರ್ತಿಸಬೇಕು (ಪ್ರಥಮ ಭಾಷೆ 125 ಅಂಕ), ಒಟ್ಟು 625 ಅಂಕಕ್ಕೆ ಅನುಗುಣವಾಗಿ ಫಲಿತಾಂಶ ನೀಡಲು ಸೂಚಿಸಿದೆ.

ಇದು 2020-21ನೇ ಸಾಲಿಗೆ ಸೀಮಿತವಾಗಿ ಇರಲಿದೆ. ಜತೆಗೆ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಸಂಬಂಧಿಸಿ ಛಾಯಾಪ್ರತಿ, ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪನ ಇರುವುದಿಲ್ಲ. ಕೊರೊನಾ ಕಾರಣಕ್ಕೆ ಅನಾರೋಗ್ಯದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರಥಮ ಅವಕಾಶ ಎಂದು ಮರು ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳು ಆಗಿರಲಿದ್ದು, 8.77 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

You cannot copy content of this page