ಇತರ ಸುದ್ದಿ

IBPS’ ನಿಂದ 10,710 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು :- ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಇತರೆ ರಾಜ್ಯಗಳ ವಿವಿಧ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಸುಮಾರು 10710 ಹುದ್ದೆಗಳನ್ನು ನೇಮಿಸಿಕೊಳ್ಳಲು ಐಬಿಪಿಎಸ್(IBPS) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪದವೀಧರ ಅಭ್ಯರ್ಥಿಗಳು ಜೂನ್, 28 ರೊಳಗೆ www.ibps.in website ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಸಹ ಬರೆಯಲು ಅವಕಾಶವಿರುತ್ತದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಸನ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕರ್ನಾಟಕದಲ್ಲಿಯೇ ಉದ್ಯೋಗ ದೊರೆಯುತ್ತದೆ.

ವಯಸ್ಸಿನ ಮಿತಿ:-

ಹಿರಿಯ ವ್ಯವಸ್ಥಾಪಕ- 21 ವರ್ಷಗಳಿಗಿಂತ ಮೇಲ್ಪಟ್ಟವರಿಗೆ – 40 ವರ್ಷಕ್ಕಿಂತ ಕಡಿಮೆ

ಮ್ಯಾನೇಜರ್- 21 ವರ್ಷಗಳಿಗಿಂತ ಮೇಲ್ಪಟ್ಟವರಿಗೆ – 32 ವರ್ಷಕ್ಕಿಂತ ಕಡಿಮೆ

ಸಹಾಯಕ ವ್ಯವಸ್ಥಾಪಕ- 18 ವರ್ಷಗಳಿಗಿಂತ ಹೆಚ್ಚು – 30 ವರ್ಷಕ್ಕಿಂತ ಕಡಿಮೆ

ಆಫೀಸ್ ಅಸಿಸ್ಟೆಂಟ್ ಗಾಗಿ – 18 ವರ್ಷ ಮತ್ತು 28 ವರ್ಷಗಳು

ಅರ್ಜಿ ಶುಲ್ಕ :-

ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅಧಿಕಾರಿ ಮತ್ತು ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 850 ರೂ.ಗಳನ್ನು ಪಾವತಿಸಬೇಕಾಗುತ್ತದೆ, ಆದರೆ ಎಸ್ಸಿ / ಎಸ್ಟಿ / ಪಿಡಬ್ಲ್ಯುಸಿಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಎರಡೂ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 175 ರೂ. ಪಾವತಿಸಬೇಕಾಗುತ್ತದೆ.

Related Articles

Leave a Reply

Your email address will not be published. Required fields are marked *

You cannot copy content of this page