ರಾಜ್ಯ

ನಾರಾಯಣಾಚಾರ್ ಅವರ ಮೃತದೇಹ ಪತ್ತೆ.

ಕೊಡಗಿನ ಬ್ರಹ್ಮಗಿರಿ ಬೆಟ್ಟದ ಕುಸಿದ ಪರಿಣಾಮ ನಾಪತ್ತೆಯಾಗಿದ್ದ ಅರ್ಚಕರ ಕುಟುಂಬದ ನಾರಾಯಣಾಚಾರ್ ಅವರ ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಎನ್ ಡಿಆರ್ ಎಫ್ ತಂಡ ಯಶಸ್ವಿಯಾಗಿದೆ.

ಬ್ರಹ್ಮಗಿರಿ ಬೆಟ್ಟ ಜರಿದು ಬೆಟ್ಟದ ಮೇಲಿದ್ದ ಅರ್ಚಕರ ಕುಟುಂಬವಿದ್ದ ಎರಡು ಮನೆಗಳು ಮಣ್ಣುಪಾಲಾಗಿತ್ತು. ಸುಮಾರು 6 ಕಿ.ಮೀ. ವರೆಗೆ ಮನೆ ಜರಿದಿದ್ದರಿಂದ ಕುಟುಂಬದವರ ಶವವತ್ತೆ ಕಾರ್ಯ ನಡೆದಿತ್ತು.

ಮೃತದೇಹ ಪತ್ತೆ ಕಾರ್ಯ 6 ದಿನಗಳಿಂದ ನಡೆದಿದ್ದು, ಮಂಗಳವಾರ ಮಧ್ಯಾಹ್ನ ಎರಡೂವರೆ ಗಂಟೆ ಸುಮಾರಿಗೆ ನಾರಾಯಣಾಚಾರ್ ಅವರ ಮೃತದೇಹ ಮನೆಯಿದ್ದ ಜಾಗದಿಂದ ಅರ್ಧ ಕಿಮೀ. ದೂರದ ಪ್ರಪಾತದಲ್ಲಿ ಪತ್ತೆಯಾಗಿದ್ದು, ಮೃತದೇಹ ಗುರುತು ಹಿಡಿಯಲಾಗದಂತೆ ಆಗಿತ್ತು.

 

Related Articles

Leave a Reply

Your email address will not be published. Required fields are marked *

You cannot copy content of this page