ರಾಜ್ಯ

ಕರ್ನಾಟಕದ ಸಾಲ ಪ್ರಮಾಣ 5 ಪಟ್ಟು ಹೆಚ್ಚು!

ಕೊರೊನಾದಿಂದ ಉದ್ಭವಿಸಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತದ ಐದು ರಾಜ್ಯಗಳ ಸಾಲ ಪ್ರಮಾಣ ಈ ವರ್ಷ ದುಪ್ಪಟ್ಟಾಗಿದೆ. ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತಮಿಳುನಾಡು ಭಾರೀ ಪ್ರಮಾಣದಲ್ಲಿ ಸಾಲ ಮಾಡಿವೆ. ಏಪ್ರಿಲ್ 7ರಿಂದ ಆಗಸ್ಟ್ 11ರ ಮಧ್ಯೆ ಕರ್ನಾಟಕವು ಐದು ಪಟ್ಟು ಹೆಚ್ಚು ಸಾಲ ಮಾಡಿದೆ.

ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್ ಡೌನ್ ಕಾರಣಕ್ಕೆ ರಾಜ್ಯಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಎಸ್ ಡಿಎಲ್ (ಸ್ಟೇಟ್ ಡೆವಲಪ್ ಮೆಂಟ್ ಲೋನ್) ವಿತರಿಸಿ, ಮಾರುಕಟ್ಟೆಯಿಂದ ಹಣ ಸಂಗ್ರಹಿಸುತ್ತಿರುವ ರಾಜ್ಯಗಳು ಹಣದ ಅಗತ್ಯವನ್ನು ಪೂರೈಸಿಕೊಳ್ಳುತ್ತಿವೆ.

Related Articles

Leave a Reply

Your email address will not be published. Required fields are marked *

You cannot copy content of this page