ರಾಷ್ಟ್ರ

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು.

ನವದೆಹಲಿ: ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಒಂದು ಸಲ ಮಗಳಾದವಳು ಎಂದಿಗೂ ಮಗಳೇ ಆಗಿರುತ್ತಾಳೆ. ಮಗ ಮದುವೆಯಾಗುವವರೆಗೆ ಮಾತ್ರ ಮಗನಾಗಿರುತ್ತಾನೆ. ಪುತ್ರಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಆಕೆಯ ಜೀವನ ಪರ್ಯಂತ ಹಕ್ಕು ಇರುತ್ತದೆ.

ಆಕೆ ಜನಿಸಿದ ದಿನಕ್ಕೂ ಹಕ್ಕಿಗೂ ಸಂಬಂಧವಿಲ್ಲ. ಹಾಗೆಯೇ ತಂದೆ ಬದುಕಿರಲಿ, ಇಲ್ಲದಿರಲಿ, ಆಕೆಗೆ ಸಮಾನ ಹಕ್ಕು ಇರುತ್ತದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಆದೇಶ ನೀಡಿದೆ.

Related Articles

Leave a Reply

Your email address will not be published. Required fields are marked *

You cannot copy content of this page