ವ್ಯಾಪಾರ ಮತ್ತು ಹಣಕಾಸು

ಕೋಲಾರದಲ್ಲಿ iphone ಘಟಕ ಪ್ರಾರಂಭ, ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಶುರು.

ಆಪಲ್ ಸಂಸ್ಥೆಯ ಐ ಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಸುಮಾರು 2900 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯೊಂದಿಗೆ ಇನ್ನೇನು ಕಾರ್ಯಾರಂಭ ಮಾಡಲಿದ್ದು, ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಲ್ಲಿ ಎಲೆಕ್ಟ್ರಾನಿಕ ಉಪಕರಣ ತಯಾರಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 43 ಎಕರೆ ಭೂಮಿಯನ್ನ ಸಹ ನೀಡಲಾಗಿದ್ದು, ಸುಮಾರು 10 ಸಾವಿರ ಉದ್ಯೋಗಾವಕಾಶಗಳು ದೊರೆಯುವ ನಿರೀಕ್ಷೆ ಇದೆ.                                                                          ಇನ್ನು ಐ ಪೋನ್ ಕಂಪನಿ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಕಂಪನಿಯಲ್ಲಿ ಉದ್ಯೋಗ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಕಂಪನಿಯಲ್ಲಿ 2300 ಹುದ್ದೆ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೊದಲ ಹಂತದಲ್ಲಿ 5000 ಮಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 2700 ಮಂದಿ ನೇಮಕಗೊಂಡಿದ್ದು ಅವರಿಗೆ ತರಬೇತಿ ನೀಡಲಾಗಿದೆ. ಇನ್ನು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಮಹಿಳೆಯರಿಗೆ ಹೆಚ್ಚು ಹೆಚ್ಚು ಹುದ್ದೆ ನೀಡಲಾಗುತ್ತಿದೆ. ಉಳಿದಂತೆ ಮುಂದಿನ ಮಾರ್ಚ್ ತಿಂಗಳಲ್ಲಿ ಉಳಿದ 5000 ಮಂದಿಗೆ ಉದ್ಯೋಗ ನೀಡಲು ಸಿದ್ದತೆ ನಡೆಸಲಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page