ರಾಜ್ಯ

ರಾಜ್ಯ ಸರ್ಕಾರದಿಂದ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ.

ಬೆಂಗಳೂರು : ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯಸರ್ಕಾರ ಬಿಡುಗಡೆ ಮಾಡಿರುವಂತ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಸೆಪ್ಟೆಂಬರ್ 30ರವರಗೆ ರಾಜ್ಯಾಧ್ಯಂತ ಶಾಲಾ-ಕಾಲೇಜು ಆರಂಭಕ್ಕೆ ನಿಷೇಧ ವಿಧಿಸಲಾಗಿದೆ. ಆದ್ರೇ ಆನ್ ಲೈನ್ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಇನ್ನೂ ಸೆಪ್ಟೆಂಬರ್ 7ರಿಂದ ನಮ್ಮ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಮಲ್ಟಿಫ್ಲೆಕ್ಸ್ ತೆರೆಯೋದಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಅನ್ ಲಾಕ್ 4.0 ಮಾರ್ಗಸೂಚಿ. 

ಯಾವುದಕ್ಕೆ ಅನುಮತಿ

 • ಅನ್ ಲೈನ್, ದೂರ ಶಿಕ್ಷಣ ಕಲಿಕೆಗೆ ಅನುಮತಿ
 • 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿ
 • ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಧೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು(ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್ ತೆರೆಯಲು ಅನುಮತಿ
 • ಉನ್ನತ ಶಿಕ್ಷಣ ಇಲಾಖೆಯ ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಸೋಧನಾ ವಿದ್ಯಾರ್ಥಿಗಳು (ಪಿಹೆಚ್ ಡಿ ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ
 • ಸೆಪ್ಟೆಂಬರ್ 7ರಿಂದ ನಮ್ಮ ಮೆಟ್ರೋ ಸಂಚಾರಕ್ಕೆ ಅನುಮತಿ
 • ಸೆಪ್ಟೆಂಬರ್ 20ರವರೆಗೆ ವಿವಾಹ ಸಂಬಂಧಿ ಸಮಾರಂಭಗಳಿಗೆ 50 ಜನರಿಗೆ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರಿಗೆ ಅವಕಾಶ. ಸೆಪ್ಟೆಂಬರ್ 20ರ ನಂತ್ರ 100 ಜನರ ಗರಿಷ್ಠ ಮಿತಿಗೆ ಅನುಮತಿ
 • ಬಯಲು ಮಂದಿರಗಳನ್ನು ತೆರೆಯಲು ಅನುಮತಿ

ಯಾವುದಕ್ಕೆ ಅನುಮತಿ ಇಲ್ಲ

 • ಸಿನಿಮಾ ಮಂದಿರಗಳು ತೆರೆಯಲು ಅನುಮತಿ ಇಲ್ಲ
 • ಈಜುಕೊಳ ತೆರಯಲು ಅನುಮತಿ ಇಲ್ಲ
 • ಮನೋರಂಜನಾ ಉದ್ಯಾನವನಗಳು ತೆರೆಯಲು ಅವಕಾಶವಿಲ್ಲ
 • ರಂಗಮಂದಿರಗಳನ್ನು ತೆರೆಯಲು ಅವಕಾಶವಿಲ್ಲ
 • ಅಂತರಾಷ್ಟ್ರೀಯ ಮಿನಾಗಳ ಪ್ರಯಾಣದ ಮೇಲೆ ನಿರ್ಬಂಧ

Related Articles

Leave a Reply

Your email address will not be published. Required fields are marked *

You cannot copy content of this page