ರಾಷ್ಟ್ರ

ಆಂಧ್ರ ಪ್ರದೇಶದ ಮಾಜಿ ಸಿಎಂ ಎನ್​. ಚಂದ್ರಬಾಬು ನಾಯ್ಡು ಪ್ರಯಾಣಿಸುತ್ತಿದ್ದ ಕಾರು ಅಪಘಾತ.

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡುವರು ಭೀಕರ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವ್​ ಆಗಿರುವ ಘಟನೆ ಶನಿವಾರ ನಡೆದಿದೆ.

ನಾಯ್ಡು ಅವರು ವಿಜಯವಾಡದಿಂದ ಹೈದರಾಬಾದ್​ಗೆ ತೆರಳುವಾಗ ಘಟನೆ ನಡೆದಿದೆ. ಮಾರ್ಗ ಮಧ್ಯೆ ಬಿಡಾಡಿ ದನವೊಂದು ದಿಢೀರನೆ ರಸ್ತೆಗೆ ಅಡ್ಡಲಾಗಿ ಬಂದಿದ್ದರಿಂದ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಸ್ಕಾರ್ಟ್​ ವಾಹನದ ಚಾಲಕ ತಕ್ಷಣ ಬ್ರೇಕ್​ ಹಾಕಿದ್ದಾರೆ.ಈ ವೇಳೆ ಹಿಂಬದಿಯಿದ್ದ ಬೆಂಗಾವಲು ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಬಾನೆಟ್​ ಸಂಪೂರ್ಣ ಜಖಂಗೊಂಡಿರುವುದನ್ನು ಮೇಲಿನ ಚಿತ್ರದಲ್ಲಿ ಕಾಣಬಹುದಾಗಿದೆ.ಅದೃಷ್ಟವಶಾತ್​ ನಾಯ್ಡು ಅವರು ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Source: ವಿಜಯವಾಣಿ

Related Articles

Leave a Reply

Your email address will not be published. Required fields are marked *

You cannot copy content of this page