ವ್ಯಾಪಾರ ಮತ್ತು ಹಣಕಾಸು

ಮೀನುಗಾರರಿಗೆ ಬಂಪರ್ ಕೊಡುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ.

ಹೊಸದಿಲ್ಲಿ: ಮೀನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಎಂದೇ ಬಣ್ಣಿಸಲಾಗಿರುವ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮೀನುಗಾರಿಕೆ ಕ್ಷೇತ್ರವನ್ನೂ “ಆತ್ಮನಿರ್ಭರ’ಗೊಳಿಸ ಬೇಕು ಎಂಬ ಉದ್ದೇಶದಿಂದ ಸರಕಾರ ಈ ಯೋಜನೆಗೆ ಚಾಲನೆ ನೀಡಿದೆ. ಪಶುಗಳ ಆರೋಗ್ಯದ ಮೇಲೆ ನಿಗಾ ಇರಿಸುವ “ಇ-ಗೋಪಾಲ್‌’ ಆಯಪ್ ಗೂ ಚಾಲನೆ ಸಿಕ್ಕಿದೆ.

ಮುಂದಿನ ನಾಲ್ಕೈದು ವರ್ಷ ಗಳಲ್ಲಿ ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋ. ರೂ. ವೆಚ್ಚ ಮಾಡಲಾಗುವುದು. ಈ ಯೋಜನೆಯಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಮೂಲಸೌಕರ್ಯ, ಆಧುನಿಕ ಸಲಕರಣೆ ಮತ್ತು ಹೊಸ ಮಾರುಕಟ್ಟೆಗಳು ಸಿಗಲಿವೆ.
ಈ ಯೋಜನೆ 21 ರಾಜ್ಯಗಳಲ್ಲಿ ವಿಸ್ತರಣೆಯಾಗಲಿದ್ದು, ಬಿಹಾರದಲ್ಲಿ ಗುರುವಾರ ಚಾಲನೆ ನೀಡಲಾಗಿದೆ ಎಂದು ಮೋದಿ ಹೇಳಿದರು.

ಮತ್ಸ್ಯ ಸಂಪದ ಯೋಜನೆ ಜತೆಯಲ್ಲೇ ಮೋದಿ ಅವರು ಇ-ಗೋಪಾಲ್‌ ಮೊಬೈಲ್‌ ಆಯಪ್ಲಿಕೇಶನ್‌ಗೂ ಗುರುವಾರ ಚಾಲನೆ ನೀಡಿದರು. ಈ ಆಯಪ್‌ ಮೂಲಕ ರೈತರು ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಆಯ್ಕೆ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗುತ್ತದೆ. ಜಾನುವಾರುಗಳ ಆರೈಕೆ, ಉತ್ಪಾದಕತೆ, ಆರೋಗ್ಯ, ಆಹಾರ ಕ್ರಮದ ಬಗ್ಗೆ ಈ ಆಯಪ್‌ನಲ್ಲಿ ಮಾಹಿತಿ ಪಡೆಯಬಹುದು ಎಂದು ಮೋದಿ ಹೇಳಿದರು.

Related Articles

Leave a Reply

Your email address will not be published. Required fields are marked *

You cannot copy content of this page