ವಿಜ್ಞಾನ ಮತ್ತು ತಂತ್ರಜ್ಞಾನ

ಕೊರೋನಾ ರ‍್ಯಾಪಿಡ್ ಟೆಸ್ಟ್ ನಿಂದ ತಪ್ಪು ಫಲಿತಾಂಶ !

ನವದೆಹಲಿ: ರೋಗ ಲಕ್ಷಣ ಹೊಂದಿದ್ದರೂ, ರ‍್ಯಾಪಿಡ್ ಆಯಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ತೋರಿಸಿದರೆ ಅಂಥವರನ್ನು ಆರ್‌ಟಿ-ಪಿಸಿಆರ್ ಮೂಲಕ ಮತ್ತೊಮ್ಮ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.

ಸೋಂಕು ಹರಡುವುದನ್ನು ತಡೆಯಲು ಯಾವುದೇ ಪ್ರಕರಣಗಳು ತಪ್ಪಿಹೋಗದಂತೆ ನೋಡಿಕೊಳ್ಳಬೇಕು. ಕಡಿಮೆ ವೆಚ್ಚ ತಗಲುವುದರಿಂದ ರಾಜ್ಯಗಳು ರ‍್ಯಾಪಿಡ್ ಆಯಂಟಿಜನ್ ಪರೀಕ್ಷೆಯನ್ನು ಹೆಚ್ಚು ನಡೆಸುತ್ತಿವೆ. ಆದರೆ ಈ ಪರೀಕ್ಷೆಗಳು ಹೆಚ್ಚಿನ ಪ್ರಮಾಣದಲ್ಲಿ ತಪ್ಪು ಫಲಿತಾಂಶ ನೀಡುತ್ತಿವೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹ ಗುರುತಿಸಿದೆ. ಹೀಗಾಗಿ ನೆಗೆಟಿವ್ ತೋರಿಸಿದ ರೋಗಲಕ್ಷಣ ಹೊಂದಿರುವವರನ್ನು ಮತ್ತೊಮ್ಮೆ ಪರೀಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Related Articles

Leave a Reply

Your email address will not be published. Required fields are marked *

You cannot copy content of this page