ಶಿಕ್ಷಣ

ಪಾಲಕರ ಪ್ರತಿಷ್ಠೆಯಾದ ಅಂಕಪಟ್ಟಿ ಆಧಾರಿತ ಶಿಕ್ಷಣ ಇನ್ನಿರಲ್ಲ : ಪ್ರಧಾನಿ ಮೋದಿ.

ನವದೆಹಲಿ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲವಾಗಿದೆ. ಕಲೆ, ವಾಣಿಜ್ಯ, ವಿಜ್ಞಾನವೆಂಬ ಪರಿಧಿಯೊಳಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇಂದಿನ ಶಿಕ್ಷಣ ಏನಿದ್ದರೂ ಅಂಕಗಳತ್ತ ಗಮನ ಹರಿಸುತ್ತಿವೆ. ಇದು ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಪಾಲಕರಿಗೆ ಅಂಕಪಟ್ಟಿ ಎಂಬುದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಇನ್ನುಮುಂದೆ ಇದಾವುದೂ ಇರಲಾರದು. ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020ಯ ವಿಶೇಷತೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು.

ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ , 21ನೇ ಶತಮಾನದಲ್ಲಿ ಶಾಲಾ ಶಿಕ್ಷಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಓದಿಗಾಗಿ-ಕಲಿಕೆ, ಕಲಿಕೆಗಾಗಿ ಓದು ಎಂಬ ಉದ್ದೇಶ ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಆಗಬೇಕು.

ವಿನೋದದ ಮೂಲಕ ಕಲಿಕೆ, ಚಟುವಟಿಕೆ ಮೂಲಕ ಕಲಿಕೆ ಮತ್ತು ಶೋಧನೆ ಮೂಲಕ ಒಂದು ಕೇಂದ್ರಿತವಾಗಿ ಮಕ್ಕಳು ಕಲಿಯಲು ಸಾಧ್ಯವಾಗುವುದು ಶಿಕ್ಷಕರ ಮೂಲಕ. ನವ ಭಾರತದ ಉದಯಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸರಿಯಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿತೋರಿಸಬೇಕು. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನ ಪ್ರವೃತ್ತಿ ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ನೂತನ ಶಿಕ್ಷಣ ನೀತಿ ನವ ಭಾರತ ಉದಯಕ್ಕೆ ಬೀಜ ಬಿತ್ತಲಿದ್ದು 21ನೇ ಶತಮಾನಕ್ಕೆ ಹೊಸ ದಿಕ್ಕು ನೀಡಬೇಕು, ವಿದ್ಯಾರ್ಥಿಗಳು 21ನೇ ಶತಮಾನದಲ್ಲಿ ಈ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಲೆಗಳಲ್ಲಿ ಪರೀಕ್ಷೆ ನಡೆಸಿ ನೀಡಲಾಗುವ ಅಂಕಪಟ್ಟಿ ಮಕ್ಕಳಿಗೆ ಒತ್ತಡದ ಪಟ್ಟಿಯಾಗಿ ಪರಿಣಮಿಸಿದರೆ ಪೋಷಕರಿಗೆ ತಮ್ಮ ಮಕ್ಕಳ ಪ್ರತಿಷ್ಠೆಯ ಪಟ್ಟಿಯಾಗಿದೆ. ಈ ಮನೋಭಾವನೆ, ಒತ್ತಡವನ್ನು ತೆಗೆದುಹಾಕುವುದೇ ನೂತನ ಶಿಕ್ಷಣ ನೀತಿಯ ಗುರಿಯಾಗಿದೆ. ಓದಿಗಾಗಿ-ಕಲಿಕೆ, ಕಲಿಕೆಗಾಗಿ-ಒದು ಎಂಬ ಉದ್ದೇಶ ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಆಗಬೇಕು. ಸಾಕ್ಷರತೆಯ ಬುನಾದಿ ಭದ್ರವಾಗಬೇಕು. ಮೂರನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಬಾಲಕ ನಿಮಿಷಕ್ಕೆ 30ರಿಂದ 40 ಶಬ್ದಗಳನ್ನು ಓದಬೇಕು. ಮಕ್ಕಳ ಕಲಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಳಿಸಬೇಡಿ. ಮಕ್ಕಳಲ್ಲಿ ಗಣಿತಶಾಸ್ತ್ರೀಯ ಮತ್ತು ವೈಜ್ಞಾನಿಕ ಯೋಚನೆಯನ್ನು ಬೆಳೆಸುವ ಕೆಲಸ ನೂತನ ಶಿಕ್ಷಣ ನೀತಿಯಲ್ಲಾಗಬೇಕಿದೆ ಎಂದು ಪ್ರಧಾನಿ ಹೇಳಿದರು.

Related Articles

Leave a Reply

Your email address will not be published. Required fields are marked *

You cannot copy content of this page