ವಿಜ್ಞಾನ ಮತ್ತು ತಂತ್ರಜ್ಞಾನ

ಪ್ಲಾಸ್ಟಿಕ್ ತಿನ್ನುವ ಹುಳವನ್ನು ಪತ್ತೆ ಮಾಡಿದ ಕರ್ನಾಟಕ ವಿವಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ.

ಧಾರವಾಡ : ವಿನಾಶಕಾರಿ ಪ್ಲಾಸ್ಟಿಕ್ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗಾಗಿ ವಿಶ್ವದಾದ್ಯಂತ ನಡೆಯುತ್ತಿರುವ ಮಹತ್ವದ ಅಧ್ಯಯನಗಳ ನಡುವೆ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಯೊಬ್ಬರು ಪ್ಲಾಸ್ಟಿಕ್ ತಿನ್ನುವ ಹುಳವನ್ನು ಪತ್ತೆ ಮಾಡಿದ್ದಾರೆ.

ಶೀತಲ್ ಕಸ್ತಿ ಎಂಬ ವಿದ್ಯಾರ್ಥಿ ಮಾರ್ಗದರ್ಶಕರಾದ ಡಾ.ಸಿ.ಟಿ ಶಿವಶರಣ ಅವರ ಮಾರ್ಗದರ್ಶನದಲ್ಲಿ ಪ್ಲಾಸ್ಟಿಕ್ ತಿನ್ನುವ ಹುಳುವನ್ನು ಪತ್ತೆ ಮಾಡಿದ್ದು, ಈ ಹುಳುಗಳು ಪ್ಲಾಸ್ಟಿಕ್ ಚೀಲವನ್ನು ತಿಂದಿರುವ ಗುಣವನ್ನು ಪತ್ತೆಹಚ್ಚಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶೀತರ್ ಕೆಸ್ತಿ, ಗೋಧಿ, ಚೋಳದ ಚೀಲದಲ್ಲಿ ಕಂಡುಬರುವ ಬಾಲಹುಳು ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಗಳನ್ನು ತಿಂದಿರುವುದು ಪ್ರಯೋಗಾಲಯದಲ್ಲಿ ಪತ್ತೆಯಾಗಿದೆ.ಹುಳುಗಳ ಮಲವನ್ನು ಪರೀಕ್ಷೆಗೆಒಳಪಡಿಸಿದಾಗ ಅದರ ಮಲ ನಿಸರ್ಗದಲ್ಲಿ ಕರಗಬಲ್ಲ ಅಂಶಗಳು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

You cannot copy content of this page